webnovel

ಪೋಷಕರ ಕಾಳಜಿ/Great Parents concern

ಒಬ್ಬ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಯಾವ ರೀತಿ ಶಿಕ್ಷಕರೊಂದಿಗೆ ತಮ್ಮ ಕಳಕಳಿಯ ಭಾವವನ್ನು ವ್ಯಕ್ತಪಡಿಸಿದ್ದಾರೆ ಎಂಬುದು ಈ ಪುಸ್ತಕದ ಮುಖ್ಯ ಉದ್ದೇಶ . ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂದು ಸ್ವಾಮಿ ವಿವೇಕಾನಂದರವರು ಹೇಳಿದ ಹಾಗೆ ಮಕ್ಕಳು ಚಿಕ್ಕವರಿದ್ದಾಗಲೇ ಅವರಿಗೆ ಜೀವನದ ಮೌಲ್ಯಗಳನ್ನು ಕಲಿಸಬೇಕು.ಅವಾಗ ಮಾತ್ರ ಅವರು ಜೀವನದಲ್ಲಿ ಏನನ್ನಾದರೂ ಸಾಧಿಸಬಲ್ಲರು. ಕಷ್ಟವಾಗಲಿ ಸುಖವಾಗಿರಲಿ ಸರಿಯಾದ ದಾರಿಯಲ್ಲಿ ನಡಿಯಬೇಕೆಂಬುವುದೇ ಪೋಷಕರ ಆಸೆ. ಮೌಢ್ಯವನ್ನು ಹೋಗಲಾಡಿಸಿ, ಸತ್ಯದ ಕಡೆಗೆ ಚಲಿಸಬೇಕು,ಗುರುಗಳು ಸಹ ವಿದ್ಯಾರ್ಥಿಗಳಿಗೆ ಪುಸ್ತಕದ ಚಟುವಟಿಕೆ ಭೋದಿಸದೆ,ಮತ್ತಿತ್ತರ ಒಳ್ಳೆಯ ಚಟುವಟಿಕೆಗಳನ್ನು ಭೋದಿಸುವುದು ಒಳ್ಳೆಯದು.

Prasad_M_K · ファンタジー
レビュー数が足りません
7 Chs

ಸ್ಪೂರ್ತಿ ಎಂದರೇನು?

ಸ್ಫೂರ್ತಿಎಂದರೇನು?, ಸ್ಪೂರ್ತಿ ಎಂದರೆ ನಮ್ಮೊಳಗಿನ ಒಂದು ಪ್ರಮುಖ ಭಾವನೆ ಮಾತ್ರವಲ್ಲದೆ ಅದು ಒಂದು ಘಟನೆಯಿಂದ ಅಥವಾ ಒಂದು ವಸ್ತುವಿಂದ ಸಿಗುತ್ತದೆ. ಗುರಿ ಯಾವತರಹ ಬೆನ್ನಟ್ಟಬೇಕು ಎಂದರೆ ಪ್ರತಿ ದಿನ ಯುದ್ಧ ಅಂತಾ ಚಿಂತಿಸಿ ಅದನ್ನು ಗೆಲ್ಲುವುದೇ ನನ್ನ ಹಠವಾಗಿರಲಿ ಅಂತಾ ಯೋಚಿಸುವುದು. ಪ್ರತಿ ದಿನ ಗೆಲ್ಲಲು ಬೇಕಾದ ಧೈರ್ಯವೇ ಸ್ಫೂರ್ತಿ. ಸ್ಫೂರ್ತಿಯನ್ನು ಹುಡುಕಬೇಕು ಯಾವ ತರಹ ಹುಡುಕಬೇಕು ಎಂದರೆ ನಮ್ಮ ಬಂಧು ಬಳಗದವರ ಹತ್ತಿರ, ನಮ್ಮ ಸ್ನೇಹಿತರಲ್ಲಿ, ನಾವೆಲ್ಲ ಓದುವ ಪುಸ್ತಕದಲ್ಲಿ,ನಾವು ಮಾತನಾಡುವ ಹಿರಿಯ ಹಾಗೂ ಕಿರಿಯರಲ್ಲಿ. ಹೊಸ ಹೊಸ ಕೆಲಸವನ್ನು ಮಾಡಲು ಸ್ಫೂರ್ತಿಯ ಅಗತ್ಯ ತುಂಬಾ ಇರುತ್ತದೆ. ಆ ತರಹ ನಮ್ಮ ಮನಸ್ಸನ್ನು ಸಿದ್ದಗೊಳಿಸಬೇಕು. ಕಠಿಣ ಪರಿಶ್ರಮ ಅತ್ಯಗತ್ಯ, ಏನಾದರು ಸಾಧಿಸಿಯೇ ತಿರುತ್ತೇನೆ ಎಂದು ಯೋಚಿಸುವ ಹಠವೆ ಸಾಧನೆಯ ಮೊದಲ ಹೆಜ್ಜೆಯಾಗಿ ಮಾರ್ಪಡುತ್ತದೆ.

ನಾವು ಮಾಡುವ ಕೆಲಸ ,ನಾವು ತೆಗೆದುಕೊಳ್ಳುವ ನಿರ್ಧಾರ ಇನ್ನೊಬ್ಬರಿಗೆ ಸ್ಫೂರ್ತಿ ಆಗಬಹುದು ಎಂದು ಯೋಚಿಸಿದಾಗ ಅದು ನಮಗೂ ಸ್ಫೂರ್ತಿಯಾಗುವುದರಲ್ಲಿ ಅನುಮಾನವಿಲ್ಲ.

ಜೀವನದಲ್ಲಿ ಪ್ರಯತ್ನಿಸುವುದನ್ನು ನಿಲ್ಲಿಸಬಾರದು. ಗುರಿ ಮುಟ್ಟುವ ತನಕ ನಿಲ್ಲಬಾರದು. ನಮ್ಮ ಮೇಲಿನ ನಂಬಿಕೆ, ವಿಶ್ವಾಸವನ್ನು ಕಳೆದುಕೊಳ್ಳಬಾರದು. ನಾವು ಏನು ಅಂದುಕೊಂಡಿರುತ್ತೇವೋ, ಅದು ನಿಶ್ಚಿತವಾಗಿಯೂ ಈಡೇರುತ್ತದೆ.ಆಗೊಮ್ಮೆ ಈಗೊಮ್ಮೆ ಮಾಡುವ ಕೆಲಸದಿಂದ ಯಶಸ್ಸು ಸಿಗಲು ಸಾಧ್ಯವಿಲ್ಲ. ಯಾವ ಕೆಲಸವನ್ನು ನೀವು ನಿರಂತರವಾಗಿ, ಗಮನವಿಟ್ಟು ಮಾಡುತ್ತೀರೋ ಆ ಕೆಲಸದಲ್ಲಿ ಮಾತ್ರ ಯಶಸ್ಸು ಸಿಗಲು ಸಾಧ್ಯ. ಯಾವತ್ತೂ ಒಳ್ಳೆಯದೇ ಸಂಭವಿಸಲಿ ಎಂದು ನಿರೀಕ್ಷಿಸುವುದು ಸಕಾರಾತ್ಮಕ ಚಿಂತನೆ ಅಲ್ಲ. ಏನೇ ಸಂಭವಿಸಿದರೂ ಅದು ಒಳ್ಳೆಯದಕ್ಕೇ ಎಂದು ಅಂದುಕೊಳ್ಳುವುದು ಸಕಾರಾತ್ಮಕ ಚಿಂತನೆ. ಇಂಥ ಚಿಂತನೆಯನ್ನು ಬೆಳೆಸಿಕೊಂಡರೆ ಎಂಥ ಸನ್ನಿವೇಶವನ್ನಾದರೂ ಎದುರಿಸಬಹುದು. ಎಡವಿ ಬೀಳುವ ಸಂದರ್ಭಗಳು ಬರುತ್ತಲೇ ಇರುತ್ತವೆ.ದಾಟಿಹೋಗಲು ಯತ್ನಿಸಿ.

ಸಾಧ್ಯವಾಗಲಿಲ್ಲವೆಂದರೆ ಬಿದ್ದ ಮೇಲೆ ಪುಟಿದೇದ್ದು ನಿಲ್ಲಲು ಮರೆಯಬೇಡಿ. ಇನ್ನೊಬ್ಬರಿಗಿಂತ ನಾನು ಉತ್ತಮನಾ ಗಬೇಕೆಂಬುವುದು ನನ್ನ ಗುರಿಯೆ ಇಲ್ಲ ಹಿಂದೆ ನಾನು ಹೇಗೆ ಇದ್ದೆ ಅದಕ್ಕಿಂತ ನಾನು ಉತ್ತಮನಾಗಬೇಕೆಂಬುವುದೇ ನನ್ನ ಗುರಿ ಈ ತರಹ ಯೋಚನೆಗಳು ನಮಗೆ ಸ್ಫೂರ್ತಿಯನ್ನು ಕೊಡುತ್ತವೆ. ನಾವು ನಮ್ಮೊಂದಿಗೆ ನಡೆಯುವ ಸ್ಪರ್ಧೆ ಯಶಸ್ಸಿಗೆ ದಾರಿ.

You can always edit a bad page. You can't edit a blank page.

- defenceAspirant@1999(Prasad M K)

ಇನ್ನೊಬ್ಬರಿಗಿಂತ ನಾನು ಉತ್ತಮನಗಬೇಕೆಂಬುವುದು ನನ್ನ ಗುರಿಯೆ ಇಲ್ಲ ಹಿಂದೆ ನಾನು ಹೇಗೆ ಇದ್ದೆ ಅದಕ್ಕಿಂತ ನಾನು ಉತ್ತಮನಗಬೇಕೆಂಬುವುದೇ ನನ್ನ ಗುರಿ ಈ ತರಹ ಯೋಚನೆಗಳು ಸ್ಫೂರ್ತಿಯನ್ನು ಕೊಡುತ್ತವೆ. ನಾವು ನಮ್ಮೊಂದಿಗೆ ನಡೆಯುವ ಸ್ಪರ್ಧೆ ಯಶಸ್ಸಿಗೆ ದಾರಿ. ನಾವು ಮಾಡುವ ಕೆಲಸ ,ನಾವು ತೆಗೆದುಕೊಳ್ಳುವ ನಿರ್ಧಾರ ಇನ್ನೊಬ್ಬರಿಗೆ ಸ್ಫೂರ್ತಿ ಆಗಬಹುದು ಎಂದು ಯೋಚಿಸಿದಾಗ ಅದು ನಮಗೂ ಸ್ಫೂರ್ತಿಯಾಗುವುದರಲ್ಲಿ ಅನುಮಾನವಿಲ್ಲ.

Prasad_M_Kcreators' thoughts