webnovel

TSIP Tree Planation Drive

ದಿನಾಂಕ 2.11.2023 ರಂದು ನಮ್ಮ ಕಂಪನಿ ಆದಂತಹ ತೋಷಿಬಾ ಇವರು Tree Plantation Drive ಅಂತ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ನಾನು ಸರಿಯಾಗಿ ಈಮೇಲು ನೋಡಿರಲಿಲ್ಲ ಸರ್ವೇನು ಮಾಡಿರಲಿಲ್ಲ ಅದೇ ಸಮಯಕ್ಕೆ ನನ್ನ ಗೆಳೆಯ ಶ್ರೀನಿವಾಸ್ ಕಾಲ್ ಮಾಡಿ ಕೇಳಿದಾಗ ಡೈರೆಕ್ಟಾಗಿ ಹೇಳ್ಬಿಟ್ಟೆ ಸರ್ವೇ ಕ್ಲೋಸ ಆಗಿದೆ ಅಂತಾ ಆವಾಗ ಸ್ವಲ್ಪ ಬೇಜಾರಾಯಿತು.

ಗೌಡ್ರು ಅಂದ್ರೆ ಸುಮ್ನೇನಾ? ಹೆಂಗೋ ಏನೋ ಮಾಡಿ ಲಿಸ್ಟಲ್ಲಿ ಹೆಸರು ಸೇರಿಸೇ ಬಿಟ್ಟರು. ಎಲ್ಲಿಲ್ಲದೋ ಖುಷಿ . TREE PLANTATION DRIVE ಗೆ ಹೋಗುವುದು ಫಿಕ್ಸ್ ಆಯಿತು, ಆದ್ರೆ ಎಲ್ಲಿ ಹೋಗುವುದು ಅಂತಾ ಫಿಕ್ಸ್ ಆಗಿರಲಿಲ್ಲ. ನಾವೆಲ್ಲHR ಮೇಲ್ ಗೆ ವೇಟ್ ಮಾಡ್ತಾಯಿದ್ವಿ. ಯಾವ ಪ್ಲೇಸ್ ಗೆ ಕರೆದುಕೊಂಡು ಹೋಗುತ್ತಾರೆ ಅಂತ ಆದ್ರೂ ಹೇಗೆ ಹೋಗೋದು ಅಂತ ಚಿಂತೆ . ಆಫೀಸ್ ನಿಂದ ಕಾರ್ ಅರೇಂಜ್ ಮಾಡಿದ್ದರು ನಮ್ಮೆಲ್ಲರಿಗೆ ಅದು ಒಂದು ಕಡಿಮೆ ಇತ್ತು.

ಯಾರಾದ್ರೂ ಫ್ರೀ ಕರ್ಕೊಂಡ್ ಹೋಗ್ತೀನಿ ಅಂದ್ರೆ ಸುಮ್ನೆ ಬಿಡ್ತೀವಾ ಆರಾಮಾಗಿ ಸುತ್ತಾಡಿ ಬರ್ತೀವಿ ಇದು ಅದೇ ತರ ಆರಾಮವಾಗಿ ಕಾರಲ್ಲಿ ಹೋಗಿ ಬಂದರೆ ಮುಗಿತಲ್ಲ ಅಂತ ತಿಳ್ಕೊಂಡಿದ್ವಿ.

ಕೊನೆಗೂ ಬೈಕ್ ತಗೊಂಡ್ ಹೋಗೋದು ಅಂತ ಫಿಕ್ಸ್ ಆಯಿತು ನಾವು ಅದಕ್ಕೆಲ್ಲ ರೆಡಿ ಆದ್ವಿ.

ಬೈಕರ್ ವಾಟ್ಸಾಪ್ ಗ್ರೂಪ್ ಒಂದು ಕ್ರಿಯೇಟ್ ಆಯ್ತು,ಎಲ್ಲರೂ ಯಾರು ಯಾರು ಬರೋದಕ್ಕೆ ready ಇದ್ದೋರು ಗ್ರೂಪ್ ಜಾಯಿನ್ ಆದ್ರೂ.

ನನ್ನ ಪ್ರೀತಿಯ ಗೆಳೆಯಾ 5AMಗೆ ಕಾಲ್ ಮಾಡಿ ಎಬ್ಬಿಸಿಬಿಟ್ಟ. ನಾನು ಎದ್ದು ಸ್ನಾನ ಮಾಡಿ ರೆಡಿ ಆಗಿಬಿಟ್ಟೆ.

ನನ್ನ ಕರಿಯೋಕೆ ಅಂತಾ ಸುಮಾರು 6.30am ಗೆ ಬಂದಾ ಇಬ್ರು ಮೇನ್ ಆಫೀಸ್ ಗೆ 6.45am ಗೆ ರೀಚ್ ಆಗಿದ್ವಿ.

6.30ಗೆ ಯಾರು ಒಬ್ರು ಬಂದಿರಲಿಲ್ಲ ತ್ರಿಮೂರ್ತಿ ಅವರನ್ನ ಬಿಟ್ಟು .ಪಾಪಾ ಬೇಗ ಬಂದು ಎಲ್ಲರಿಗೂ ಕಾಯಿತ ಇದ್ರು ಅನ್ಸತ್ತೆ ಅರ್ಥಾರ್ಥ್ ಅವರ ಪ್ರೀತಿಯ ಪಾರಿವಾಳ ಇನ್ನು ಬಂದಿರಲಿಲ್ಲ

ಸ್ವಲ್ಪ ಹೊತ್ತು ಆದಮೇಲೆ ಎಲ್ಲರೂ ಬರೋಕೆ ಸ್ಟಾರ್ಟ್ ಮಾಡಿದ್ರು, ಅಲ್ಲಿವರೆಗೂ ನಾವೆಲ್ಲ ಟೀಶರ್ಟ್ ಮತ್ತು snacks ತಿನ್ನುತ್ತಾ ಕುಳಿತುಕೊಂಡು ಆಫೀಸ್ ಅಲ್ಲಿ ಟೈಮ್ ಪಾಸ್ ಮಾಡ್ಕೊಂಡು ಕುಳಿತಿದ್ವಿ.

ಅಷ್ಟರಲ್ಲಿ 7.30 ಸುಮಾರು ಎಲ್ಲರೂ ಬಂದ್ರು,ಬೈಕ್ ಅಲ್ಲಿ ಬರೋದು ರೆಡಿ ಆಗಿದ್ರು, ಕಾರ್ ಅಲ್ಲಿ ಹೋಗೋರು ಕಾರ್ ಅಲ್ಲಿ ಹೋದ್ರು.

Bikers ಎಲ್ಲರೂ office ಮುಂದೆ ಪೋಸ್ ಕೊಟ್ಟಿದ್ದೆ ಕೊಟ್ಟಿದ್ದು, ಎಲ್ಲರೂ hero ತರ ಕಾಣಿಸ್ತಾ ಇದ್ರು, ಯಾವ hero ಗಿಂತ ಕಮ್ಮಿ ಇರಲಿಲ್ಲ ನಮ್ ಗೆಳೆಯರು.

ನಾವೆಲ್ಲ ಬೈಕ್ ಮೇಲೆ ಹೋಗೋಕೆ ಸ್ಟಾರ್ಟ್ ಮಾಡಬೇಕೆಂದಾಗ ನಮ್ ಮತ್ತೊಬ್ಬ ಬಸಣ್ಣಗೌಡ್ರು ಗೆಳಯರು ಬಂದಿರ್ಲಿಲ್ಲ.

ಅವ್ರಿಗೆ ಕಾಲ್ ಮಾಡಿದಾಗ ಗೊತ್ತುಯಿತು ಅವ್ರು ಎದ್ದಿದ್ದೆ 7.30ಗೆ ಅಂತಾ, ನಾವೆಲ್ಲ ಆವಾಗ ಬಿಕ್ಕಿ ಬಿಕ್ಕಿ ನಗತಾಇದ್ವಿ.

ಎಲ್ಲರೂ ಕೇಳೋಕೆ ಸ್ಟಾರ್ಟ್ ಮಾಡಿದ್ರು ಬನ್ನಿ ಹೋಗೋಣ ಅಂತಾ ಗೆಳೆಯನ ಬಿಟ್ಟು ಹೋಗೋಕೆ ಯಾರಿಗಾದ್ರೂ ಮನಸ್ಸು ಬರತ್ತೆ.

ಅದ್ ಅಷ್ಟು ಬೇಗ ಹೇಗೆ ತಯಾರಾಗಿ ಬಂದ್ರು ಗೊತ್ತಿಲ್ಲ 5 ನಿಮಿಷದಲ್ಲಿ ನಾವಿರೋ ಪ್ಲೇ ಗೆ FZ ಬೈಕ್ ತಗೊಂಡು Hero ತರ ಎಂಟ್ರಿ ಕೊಟ್ರು.ಸ್ನಾನ ಮಾಡಿ ಬಂದ್ರೋ ಇಲ್ಲೋ ಗೊತ್ತಿಲ್ಲ but hero ತರ ಲುಕ್ ಇತ್ತು.

ನಮ್ ಬಳಗದವರೆಲ್ಲ ರೆಡಿ ಆದ್ರೂ ನಮ್ಮ ಪಯಣ ಪ್ರಾರಂಭಿಸಿದ್ವಿ.ಹಾಡುಗಳನ್ನು ಹಾಡುತ್ತ, journey ಎಂಜಾಯ್ ಮಾಡುತ್ತ ಹೊರಟಿದ್ವಿ ಅಷ್ಟರಲ್ಲಿ ಒಂದು ಎಡವಟ್ಟು.

Fz ಬೈಕ್ ಅಲ್ಲಿ petrol ಖಾಲಿ, ನಮ್ ಪುಣ್ಯ petrol ಬಂಕ್ ಪಕ್ಕದಲ್ಲಿ ಬೈಕ್ ಅಲ್ಲಿ petrol ಖಾಲಿ ಆಗಿತ್ತು.

Petrol ಹಾಕಿಸಿಕೊಂಡು, ಮತ್ತೆ ನಮ್ಮ ಸುಖಕರ ಪ್ರಯಾಣ ಪ್ರಾರಂಭಿಸಿದ್ವಿ, ಎಲ್ಲಾ bikers ಮುಂದೆ ಹೋಗಿಬಿಟ್ಟಿದ್ರು ಆವಾಗ,ಸ್ವಲ್ಪ speed ಬೈಕ್ ಹೊಡೆದುಕೊಂಡು ಎಲ್ಲರೂ ಜೊತೆ ಜಾಯಿನ್ ಆದ್ವಿ.

ಬೆಳಬೆಳಿಗ್ಗೆ ಬೈಕ್ ride ಮಜಾನೇ ಬೇರೆ ಲೆವೆಲ್ ಗೆ ಇರತ್ತೆ,ನಮ್ಮ್ ಹತ್ರ ಸೂಪರ್ ಬೈಕ್ ಇರ್ಲಿಲ್ಲ ಆದ್ರೂ ಇರೋ ಬೈಕ್ ಸೂಪರ್ ಬೈಕ್ ಕಿಂತ ಏನು ಕಮ್ಮಿ ಇರ್ಲಿಲ್ಲ.

ಮದ್ಯ ಸ್ವಲ್ಪ್ ಬ್ರೇಕ್ tea ಕುಡಿಯೋದಕ್ಕೆ, ಆವಾಗ ಸ್ಟಾರ್ಟ್ ಆಯಿತು ನಂದು ಒಂದು ಫೋಟೋ ತಗಿ ಅಂತಾ.

ಅಲ್ಲಿ ಸ್ಟಾರ್ಟ್ ಆಗಿದ್ದು ನನ್ನ ಜಂಜಾಮವಾಣಿ ಮಲಗುವವರೆಗೂ ಫೋಟೋ ತಕ್ಕೊಂಡ್ರು.

Photos ಮಾತ್ರ ಚಿಂದಿ ಗುರು.

ಮತ್ತೆ journey ಸ್ಟಾರ್ಟ್ towards destination. ನಾವ್ ಹೋಗ್ತಾಇರೋ ಜಾಗದ ಬಗ್ಗೆ ನಮಗೂ ಗೊತ್ತು ಇರಲ್ಲಿಲ್ಲ. ಗೂಗಲ್ ಮ್ಯಾಪ್ ಹಾಕೊಂಡು ಹೋದ್ವಿ. ಕೊಯಿರ ಅಂತಾ ಒಂದು ಚಿಕ್ಕ ಹಳ್ಳಿ ಅಲ್ಲಿರೋ ಸರ್ಕಾರಿ ಪ್ರೌಢ ಶಾಲೆಗೆ ಹೋಗಿದ್ದು.ನಾವೆಲ್ಲ ಹೋಗೋ ಅಷ್ಟರಲ್ಲಿ ಎಲ್ಲರೂ ಯಾವ್ದೋ ಒಂದು ಗೇಮ್ ಆಡೋಕೆ ಸ್ಟಾರ್ಟ್ ಮಾಡಿದ್ರು, ನಾವೆಲ್ಲರೂ ಆಟವನ್ನು ನೋಡಿ ಆನಂದಿಸಿದ್ವಿ. ಮತ್ತೊಂದು ಏನು ಖುಷಿ ಅಂದ್ರೆ 50+ ಜನ ಬಂದಿದ್ರು.

ಸ್ವಲ್ಪ ಹೊತ್ತಿನನಂತರ ಕಾರ್ಯಕ್ರಮ ಪ್ರಾರಂಭವಾಯ್ತು,ಯಾವ ತರ ಗಿಡಗಳನ್ನು ಹಚ್ಚಬೇಕು ಅಂತಾ ಹೇಳಿಕೊಟ್ರು,ರೈತರ ಮನೆ ಕುಟುಂಬದಿಂದ ಬಂದೋರು ನಮಗೂ ಮೊದ್ಲೇ ಗೊತ್ತಿತ್ತು. 6 ಜನದ್ದು ಗ್ರೂಪ ಮಾಡಿ Tree plantation drive start ಆಯಿತು ಅಂದ್ರೆ ಗಿಡ ಹಚ್ಚೋದು. ಗಿಡಗಳ್ಳನ್ನು ನೆಡುವುದನ್ನು ಬಿಟ್ಟು ಬರಿ ಫೋಟೋಸ್ ತಕ್ಕೊಂಡಿದ್ದೆ ಹೆಚ್ಚು.

ಯಾಕೆ ಅಲ್ಲಿ ಹೋಗಿದೀವಿ ಅನ್ನೋದೇ ಸ್ವಲ್ಪ ಜನರು ಮರೆತರು,ಅವಾಗ ಮಾತ್ರ ಸ್ವಲ್ಪ ಬೇಜಾರು, ಸ್ವಲ್ಪ ಜನಗಳನ್ನು ನಾನು ನೋಡಿದೆ ಅಲ್ಲಿ ಕೈಗೆ ಸ್ವಲ್ಪಾನು ಮಣ್ಣು ಹತ್ತಿರಲಿಲ್ಲ ಬರಿ ಫೋಟೋ ತಕ್ಕೋಳೋದಕ್ಕೆ ಮಾತ್ರ ಸೀಮಿತವಾಗಿದ್ರು.

ತ್ರಿಮೂರ್ತಿ ಅವರಿಗೆ ಮಣ್ಣಿನ ಮಗ ಅಂತಾ ಕರಿತಾ ಮಣ್ಣನ್ನೇ ಹಣೆಯ ಮೇಲೆ ನಾಮದ ತರ ಕೊರೆದುಕೊಂಡು ಗಿಡಗಳನ್ನವು ನೆಡೋದಕ್ಕೆ ಪ್ರಾರಂಭಿಸಿದ್ರು,ನಮ್ ಗ್ರೂಪ ಎಲ್ಲರೂ ಸೇರಿ ನಾವು ನಿಯತ್ತಾಗಿ ಗಿಡಗಳ್ಳನ್ನು ನೆಟ್ಟು , ಕೊನೆಗೆ ಸ್ವಲ್ಪ ಫೋಟೋಸ್ ತಕ್ಕೊಂದ್ವಿ,ಆ ಶಾಲೆಯಲ್ಲಿರೊ ಸ್ವಲ್ಪ ವಿದ್ಯಾರ್ಥಿಗಳು ನಮಗೂ ಸಹಾಯವನ್ನು ಮಾಡಿದ್ರು.ನಾವೆಲ್ಲ ಗಿಡಗಳನ್ನು ನೆಟ್ಟಿರೋ ಜಗದಲ್ಲಿ ಬೇಲಿಯನ್ನು ನಮ್ಮ ಕಂಪನಿದವರೇ ಹಾಕಿಸಿದ್ದರು ಏಕೆಂದರೆ ಯಾವುದೇ ಪ್ರಾಣಿಗಳಿಂದ ಹಾನಿಯಾಗಬಾರದು ಅಂತಾ. ಹನಿ ನೀರಾವರಿ ಪದ್ಧತಿ ಮೂಲಕ ಗಿಡಗಳಿಗೆ ನೀರನ್ನು ಒದಗಿಸಲಾಗಿತ್ತು. ನಾವೆಲ್ಲ ಗಿಡಗಳನ್ನು ನೆಟ್ಟಿ ಹೋಗ್ತಿವಿ ಆದ್ರೆ ಅದರ ಜೋಪಾನ ಯಾರು ಮಾಡ್ತಾರೆ? ಅಂತಾ ಒಂದು ಯಕ್ಷ ಪ್ರಶ್ನೆ ನನ್ನ ತಲೆಯಲ್ಲಿ. ಗಿಡಗಳ್ಳನ್ನು ಅಲ್ಲಿರೋ ವಿದ್ಯಾರ್ಥಿಗಳು ಸರಿಯಾಗಿ ನೋಡಿಕೊಳ್ಳುವುದು ಅವರ ಕರ್ತವ್ಯ. ಅವರನೆಲ್ಲ ನೋಡಿದಮೇಲೆ ನನ್ನ ಹೈಸ್ಕೂಲ್ ನೆನಪಿಗೆ ಬಂತು. 130+ ಗಿಡಗಳನ್ನು ನೆಟ್ಟಿ ನಮ್ಮ ಕೆಲಸವನ್ನು ಸಹಳ ಸರಳತೆಯಿಂದ ಮುಗಿಸಿದ್ವಿ ಎಲ್ಲರೂ.

ಎಲ್ಲರೂ ಒಂದು ಕಡೆ ಕೂಡಿ ತಮ್ಮತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಗಿಡಗಳ್ಳನ್ನು ಹಚ್ಚಿ ಬರುವ ಹೊತ್ತಿಗೆ ಹೊಟ್ಟೆ ತುಂಬಾ ಹಸಿದಿತ್ತು. ಆಫೀಸ್ನನ್ನಿಂದ Snacks ಬಂದಿತ್ತು ಚೆನ್ನಾಗಿ ತಿಂದು ಹಾಗೂ ವಿದ್ಯಾರ್ಥಿಗಳಿಗೆ ಕೊಟ್ಟು ಕೊನೆಗೆ ಎಲ್ಲರೂ ಸೇರಿ ಗ್ರೂಪ್ ಫಿಕ್ಸ್ ತಕ್ಕೊಂಡು ಅಲ್ಲಿದ ಮತ್ತೆ ನಮ್ಮ ಪಯಣ ಬೆಂಗಳೂರಿನತ್ತ.

ಕಾರ್ ಅಲ್ಲಿ ಬಂದೋರು ಕಾರ್ ಅಲ್ಲಿ ಹೋದ್ರು. Bikers ಎಲ್ಲರೂ ಸೇರಿ ಚೆನ್ನಾಗಿ ಫೋಟೋ ಮತ್ತು ವಿಡಿಯೋ ಶೂಟ್ ಮಾಡಿ ಮತ್ತೆ ಬೈಕ್ journey ಸ್ಟಾರ್ಟ್ ಆಯಿತು.

ಹತ್ತಿರ ಒಂದು ಸಣ್ಣ ಬೆಟ್ಟ ಅಲ್ಲಿ ಹೋಗಿ ದೇವರ ದರ್ಶನ ಮಾಡಿ, ಗುಹೆ ಒಳಗಡೆ ಹೋಗಿ ,ಸ್ವಲ್ಲ ದೇವರ ಪ್ರಸಾದವನ್ನು ಸ್ವೀಕರಿಸಿ, ಅಲ್ಲಿನೂ ಒಂದೆರಡು ಫೋಟೋಸ್ ತಕ್ಕೊಂಡು ಮತ್ತೆ journey start ಆಯಿತು.

ಎಲ್ಲರೂ ಸ್ವಲ್ಲ ಬೇಗ ಹೋದ್ರು ನಾವೇ ಸ್ವಲ್ಪ ನಿಧಾನವಾಗಿ ಹೋಗೋಕೆ ಪ್ರಾರಂಭಿಸಿದ್ವಿ. ಮದ್ಯ ಮಧ್ಯದಲ್ಲಿ ಚೆನ್ನಾಗಿರೋ ಪ್ಲೇಸ್ ನೋಡ್ತಿದ್ವಿ ಫೋಟೋ ಶೂಟ್ ಮಾಡೋಕೆ. ಅಂತೂ ಇಂತು ಒಂದು ಚೆನ್ನಾಗಿರೋ spot ಸಿಕ್ತು, ನಮ್ ಹುಲಿಗಳೆಲ್ಲ hero ತರ ಫೋಸ್ ಕೊಟ್ಟು ಫೋಟೋ ತಕ್ಕೊಂಡಿದ್ದೋ ತಕ್ಕೊಂಡಿದ್ದು.

ನಾನು ಫೋಟೋಗ್ರಾಫರ್ ಆಗಿಬಿಟ್ಟಿದ್ದೆ, ಮೊಬೈಲ್ ಸ್ಟೋರೇಜ್ ಫುಲ್ಆಗೋತನ ಫಿಕ್ಸ್ ತಗದಿದ್ದೆ ಎಲ್ಲರುದ್ದು. ಅಲ್ಲೇ ನನ್ ಮೊಬೈಲ್ ಸ್ವಿಚೆಡ್ ಆಫ್ ಆಗಿತ್ತು. ಮತ್ತೆ tea ಕುಡಿದು ನಮ್ journey start ಮಾಡಿದ್ವಿ. ಕೊನೆಗೂ ಬೆಂಗಳೂರು ಟ್ರಾಫಿಕ್ ಅಲ್ಲಿ ಸಿಕ್ಕಿ ಲೇಟ್ ಆಗಿ ಬಂದು ನಮ್ಮ್ ನಮ್ಮ ಮನೆಗಳಿಗೆ ಹೋದ್ವಿ.

Yours,

Prasad

ಮರವನ್ನು ನೆಡುವುದು ಭವಿಷ್ಯದ ಪೀಳಿಗೆಗೆ ನಮ್ಮ ಪ್ರೀತಿಯ ಭೂಮಿಯನ್ನು ಉಳಿಸುವ ಒಂದು ಹೆಜ್ಜೆಯಾಗಿದೆ.ನಮ್ಮ ಪರಿಸರವನ್ನು ಉಳಿಸಲು ಮತ್ತು ಸಂರಕ್ಷಿಸಲು ಹೆಚ್ಚಿನ ಜಾಗೃತಿ ಮೂಡಿಸಿದ ಟ್ರೀ ಪ್ಲಾಂಟೇಶನ್ ಡ್ರೈವ್‌ಗೆ ಇಂತಹ ದೊಡ್ಡ ಉಪಕ್ರಮಕ್ಕಾಗಿ ತೋಷಿಬಾಗೆ ವಿಶೇಷ ಧನ್ಯವಾದಗಳು.

ಮತ್ತು ಬೆಂಬಲಕ್ಕಾಗಿ ನಮ್ಮ ಪ್ರೇಮ್-ಸ್ಯಾನ್ ಅವರಿಗೆ ವಿಶೇಷ ಧನ್ಯವಾದಗಳು. ಮತ್ತು ಬೈಕ್ ರೈಡ್ ಉಪಕ್ರಮವು ನಿಜವಾಗಿಯೂ ಅದ್ಭುತವಾಗಿದೆ ಮತ್ತು TSIP ಯಿಂದ ಎಲ್ಲಾ ತಂಡಗಳಲ್ಲಿ ಉತ್ತಮ ಭಾಂದವ್ಯ ಹೊಂದಲು ಇದು ಸಹಾಯಕವಾಗಿತ್ತು. ಇಂತಹ ಉತ್ತಮ ಘಟನೆಗಳು ನಮ್ಮ ಭವಿಷ್ಯದಲ್ಲಿ ಮುಂದುವರಿಯಲಿ ಎಂದು ನಾವೆಲ್ಲರೂ ಆಶಿಸುತ್ತಿದ್ದೇವೆ.

ನಾನು ಈ ಪುಸ್ತಕವನ್ನು ಟ್ಯಾಗ್ ಮಾಡಿದ್ದೇನೆ, ಬಂದು ಥಂಬ್ಸ್ ಅಪ್ ಮೂಲಕ ನನ್ನನ್ನು ಬೆಂಬಲಿಸಿ.

a tree today is a step towards saving our beloved earth for future generations.

Special Thanks to Toshiba for such a big initiative towards Tree plantation drive which has been created a greater awareness to save and protect our environment.

And also special thanks to our Prem-San for the Support.And bike ride initiative was really awesome and it's was helpful in good team building across all teams from TSIP.We all are hoping for such good events may be continue in our future.

I tagged this book, come and support me with a thumbs up.

Prasad_M_Kcreators' thoughts