webnovel

ಪೋಷಕರ ಕಾಳಜಿ/Great Parents concern

ಒಬ್ಬ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಯಾವ ರೀತಿ ಶಿಕ್ಷಕರೊಂದಿಗೆ ತಮ್ಮ ಕಳಕಳಿಯ ಭಾವವನ್ನು ವ್ಯಕ್ತಪಡಿಸಿದ್ದಾರೆ ಎಂಬುದು ಈ ಪುಸ್ತಕದ ಮುಖ್ಯ ಉದ್ದೇಶ . ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂದು ಸ್ವಾಮಿ ವಿವೇಕಾನಂದರವರು ಹೇಳಿದ ಹಾಗೆ ಮಕ್ಕಳು ಚಿಕ್ಕವರಿದ್ದಾಗಲೇ ಅವರಿಗೆ ಜೀವನದ ಮೌಲ್ಯಗಳನ್ನು ಕಲಿಸಬೇಕು.ಅವಾಗ ಮಾತ್ರ ಅವರು ಜೀವನದಲ್ಲಿ ಏನನ್ನಾದರೂ ಸಾಧಿಸಬಲ್ಲರು. ಕಷ್ಟವಾಗಲಿ ಸುಖವಾಗಿರಲಿ ಸರಿಯಾದ ದಾರಿಯಲ್ಲಿ ನಡಿಯಬೇಕೆಂಬುವುದೇ ಪೋಷಕರ ಆಸೆ. ಮೌಢ್ಯವನ್ನು ಹೋಗಲಾಡಿಸಿ, ಸತ್ಯದ ಕಡೆಗೆ ಚಲಿಸಬೇಕು,ಗುರುಗಳು ಸಹ ವಿದ್ಯಾರ್ಥಿಗಳಿಗೆ ಪುಸ್ತಕದ ಚಟುವಟಿಕೆ ಭೋದಿಸದೆ,ಮತ್ತಿತ್ತರ ಒಳ್ಳೆಯ ಚಟುವಟಿಕೆಗಳನ್ನು ಭೋದಿಸುವುದು ಒಳ್ಳೆಯದು.

Prasad_M_K · Fantasy
Not enough ratings
7 Chs

ಧೈರ್ಯಂ ಸರ್ವತ್ರ ಸಾಧನಂ

ಯಶಸ್ಸಿಗೆ ಕಾರಣವೇನು ಎಂದು ಬಹಳಷ್ಟು ಜನ ಕೇಳುತ್ತಾರೆ.ನನ್ನ ಪ್ರಕಾರ ಅಂದರೆ ನಾವೆಲ್ಲರೂ ಮನುಷ್ಯರು, ನಮಗೆಲ್ಲ ದೊಡ್ಡ ಸಮಸ್ಯೆ ಎಂದರೆ ಭಯ. ಪ್ರತಿಯೊಬ್ಬರೂ ಒಂದಲ್ಲ ಒಂದು ಭಯದಿಂದ ಬದುಕುತ್ತಾರೆ,ಆ ಭಯ ಅವರನ್ನು ಏನು ಮಾಡುವುದಕ್ಕೂ ಬಿಡುವುದಿಲ್ಲ.ಅವರು ತಮ್ಮ ಜೀವನದಲ್ಲಿ ಏನೇನೋ ಸಾಧನೆ ಮಾಡಬೇಕು ಎಂದು ಕನಸನ್ನು ಕಂಡಿರುತ್ತಾರೆ ಮತ್ತು ಆಸೆ ಪಟ್ಟಿರುತ್ತಾರೆ.ಆ ಆಸೆಗಳು ಹಾಗೂ ಕನಸುಗಳು ಕನಸಾಗಿಯೇ ಉಳಿದು ಬಿಡುತ್ತವೆ,ಇದಕ್ಕೆ ಕಾರಣ ಭಯ. ಎಲ್ಲರಿಗೂ ಒಂದಲ್ಲ ಒಂದು ಸುರಕ್ಷಿತ ವಲಯ ಸಿಕ್ಕಿರುತ್ತದೆ ಅದು ಕೆಲಸವಿರಬಹುದು, ಗೆಳೆಯರ ಬಳಗ ಇರಬಹುದು ಅಥವಾ ಇನ್ನಿತ್ತರ ವಿಷಯಗಳಿರಬಹುದು,ಈ ತರಹ ಸುರಕ್ಷಿತ ವಲಯದಲ್ಲಿ ಸ್ವಲ್ಪವಾದರೂ ಬದಲಾವಣೆ ಆದರೆ ಹೊಂದಿಕೊಂಡು ಹೋಗುವುದ್ದಕ್ಕೆ ಕಷ್ಟವಾಗುತ್ತದೆ. ಹಾಗಾಗಿ ಬಹಳಷ್ಟು ಜನರು ಅವರ ಜೀವನದ್ದಲ್ಲಿ ರಿಸ್ಕ್ ತೆಗೆದುಕೊಳ್ಳುದಕ್ಕೆ ಹೆದರುತ್ತಾರೆ.ಆ ಭಯ ಅವರನ್ನು ಏನು ಮಾಡಲು ಬಿಡುವುದಿಲ್ಲ. ಮುಂದೆ ಏನಾದರು ಸಮಸ್ಯೆ ಬಂದರೆ ಏನು ಅಂತಾ ಹೆದರುತ್ತಾರೆ. ಆ ಭಯ ಅವರನ್ನು ಏನು ಮಾಡಲು ಹಾಗೂ ಏನು ಸಾಧಿಸಲು ಬಿಡುವುದಿಲ್ಲ. ಅದೇ ಅವರು ಸ್ವಲ್ಪ ಧೈರ್ಯಮಾಡಿ ಹೆಜ್ಜೆ ಮುಂದೆ ಇಟ್ಟು ನಾನು ಎಲ್ಲವನ್ನು ಸಾಧಿಸಬಲ್ಲೆ ಎಂದು ಗಟ್ಟಿಯಾಗಿ ನಿಂತು,ಒಳ್ಳೆಯ ನಿರ್ಧಾರ ತೆಗೆದುಕೊಂಡರೆ ಎಲ್ಲವನ್ನು ಸಾಧಿಸುತ್ತಾರೆ. ಮೊದಲು ಭಯವನ್ನು ಹೋಗಲಾಡಿಸಬೇಕು,ಧೈರ್ಯವು ಸಾಧಿಸಲು ಸಹಾಯ ಮಾಡುತ್ತದೆ. ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಬರುವ ಪ್ರಧಾನ ಘಟನೆಗಳೇ ಉತ್ತಮ ಉದಾಹರಣೆಗಳಾಗಿವೆ. ರಾಮಾಯಣದ ರಾಮನಾಗಲೀ ಮಹಾಭಾರತದ ಪಾಂಡವರು ಆಗಲೀ ತಮಗೆ ಬಂದೊದಗಿದ ಆಪತ್ತನ್ನು ಎದುರಿಸುತ್ತಾ ವಿನಯ ಮತ್ತು ವಿವೇಕದಿಂದ ಯೋಚಿಸಿ ಕಾರ್ಯಪ್ರವೃತ್ತರಾಗಿ ಆ ಆಪತ್ತುಗಳಿಂದ ಪಾರಾದರು. ಸುಖ ಮತ್ತು ದುಃಖಗಳಿಂದ ಕದಲದಂತಹ ಮನಃಸ್ಥಿತಿಯಾದ ಇಂತಹ ಧೈರ್ಯವೊಂದೇ ಎಲ್ಲ ಒಳಿತಿಗೂ ಸಾಧಕವಾಗುತ್ತದೆ. ವ್ಯಕ್ತಿಯ ಸಕಲ ರೀತಿಯ ಏಳಿಗೆಗೂ ಪ್ರಾಥಮಿಕ ಸಾಧನವಾಗಿ ಬೇಕಾಗಿರುವುದು ಧೈರ್ಯ. ಬದುಕಿನ ಕೊನೆಯವರೆಗೂ ನಮ್ಮನು ಕರೆದೋಯ್ಯುವುದು ಧೈರ್ಯವೇ ಹೊರತು ಅದೃಷ್ಟವಲ್ಲ.

-defenceAspirant@1999(Prasad M K)

ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಬರುವ ಪ್ರಧಾನ ಘಟನೆಗಳೇ ಉತ್ತಮ ಉದಾಹರಣೆಗಳಾಗಿವೆ. ರಾಮಾಯಣದ ರಾಮನಾಗಲೀ ಮಹಾಭಾರತದ ಪಾಂಡವರು ಆಗಲೀ ತಮಗೆ ಬಂದೊದಗಿದ ಆಪತ್ತನ್ನು ಎದುರಿಸುತ್ತಾ ವಿನಯ ಮತ್ತು ವಿವೇಕದಿಂದ ಯೋಚಿಸಿ ಕಾರ್ಯಪ್ರವೃತ್ತರಾಗಿ ಆ ಆಪತ್ತುಗಳಿಂದ ಪಾರಾದರು. ಸುಖ ಮತ್ತು ದುಃಖಗಳಿಂದ ಕದಲದಂತಹ ಮನಃಸ್ಥಿತಿಯಾದ ಇಂತಹ ಧೈರ್ಯವೊಂದೇ ಎಲ್ಲ ಒಳಿತಿಗೂ ಸಾಧಕವಾಗುತ್ತದೆ. ವ್ಯಕ್ತಿಯ ಸಕಲ ರೀತಿಯ ಏಳಿಗೆಗೂ ಪ್ರಾಥಮಿಕ ಸಾಧನವಾಗಿ ಬೇಕಾಗಿರುವುದು

Prasad_M_Kcreators' thoughts